ಬೆಳ್ತಂಗಡಿ, ಮಾ. ೫: ಧಾರ್ಮಿಕ ನೆಲೆಯಲ್ಲಿ ದೇವರ ಸಂದೇಶದಂತೆ ನಮ್ಮ ಆಚರಣೆಗಳು ಇ ರಬೇಕು. ಧರ್ಮ ನುಡಿದಂತೆ ಎಡವದೇ ನಡೆಯುವವನೇ ನಿಜವಾದ ಇಸ್ಲಾಂ ಅನುಯಾಯಿ ಎಂದು ತಾಜುಲ್ ಉಲಮಾ ಅಬ್ದುರ್ರಹಮಾನ್ ಅಲ್‌ಬುಖಾರಿ ಉಳ್ಳಾಲ ತಂಙಳ್ ಹೇಳಿದರು.
ಅವರು ಶುಕ್ರವಾರ ಇಲ್ಲಿನ ತಾಲೂಕು ಮೈದಾನದಲ್ಲಿ ಬೃಹತ್ ಮಿಲಾದ್ ಸಮಾವೇಶ ಹಾಗೂ ತಾಜುಲ್ ಉಲಮಾ ಸಮ್ಮಾನ ಸಮಾರಂಭದಲ್ಲಿ ಸಮ್ಮಾನ ಸ್ವೀಕರಿಸಿ ಮಾತನಾಡಿದರು.
ಪ್ರಶಸ್ತಿ ಹೊಗಳಿಕೆ ಮುಖ್ಯ ಅಲ್ಲ. ಇಸ್ಲಾಂನಲ್ಲಿ ಅನೇಕ ನಿಯಮಗಳು ಇವೆ. ಅವುಗಳ ಆಚರಣೆಯ ಮಹತ್ವ, ಸರಿಯಾದ ಅರ್ಥ ತಿಳಿದಿರಬೇಕು. ಧರ್ಮವನ್ನು ಕಲಿಯಬೇಕು. ಅದರಂತೆ ನಡೆಯ ಬೇಕು ಎಂದು ಅವರು ಹೇಳಿದರು.
ಉಡುಪಿ ಖಾಝಿ ಪಿ.ಎಂ. ಇಬ್ರಾಹೀಂ ಮುಸ್ಲಿಯಾರ್ ಬೇಕಲ ಅವರು ಕಾರ್‍ಯಕ್ರಮ ಉದ್ಘಾ ಟಿಸಿದರು.
ಕುಟ್ಯಾಡಿಯ ಸಿರಾಜುಲ್ ಹುದಾ ಇದರ ಪ್ರಾಂಶುಪಾಲ ಪೇರೋಡ್ ಅಬ್ದುರ್ರಹಮಾನ್ ಸಖಾಫಿ ಮುಖ್ಯ ಭಾಷಣ ಮಾಡಿ, ಕೂರ ತಂಙಳ್ ಫಝಲ್ ಕೋಯಮ್ಮ ತಂಙಳ್‌ವಿಶೇಷ ದುವಾ ನೆರ ವೇರಿಸಿದರು.
ಮಂಜನಾಡಿ ಮಸೀದಿಯ ಅಬ್ಬಾಸ್ ಮುಸ್ಲಿಯಾರ್, ಮಾಣಿ ಮಸೀದಿಯ ಅಬ್ದುಲ್ ಹಮೀದ್ ಮುಸ್ಲಿಯಾರ್, ಕಾವಳಕಟ್ಟೆ ಹಝ್ರತ್‌ನ ಮುಹಮ್ಮದ್ ಫಅಝಿಲ್ ರಝ್ವಿ, ಸ್ವಾಗತ ಸಮಿತಿ ಸಂಯೋಜಕ ಮುರ ಮಸೀದಿಯ ಅಬೂಬಕ್ಕರ್ ಸಿದ್ಧಿಕ್ ತಂಙಳ್, ಉಜಿರೆಯ ಇಸ್ಮಾಯಿಲ್ ತಂಙಳ್, ಉಳ್ತೂರಿನ ಅಬ್ದುಸ್ಸಲಾಂ ತಂಙಳ್, ಉಜಿರೆಯ ಜಲಾಲುದ್ದೀನ್ ತಂಙಳ್, ಪರಪ್ಪಿನ ಸಿ.ಟಿ.ಎಂ. ಉಮರ್ ಆಟಕೋಯ ತಂಙಳ್, ಮಲಪ್ಪುರಂನ ಹಸನ್‌ಕುಂಞಿ ಕೋಯ ತಂಙಳ್, ಬಟ್ಲಡ್ಕದ ಮುಹ್ಸಿನ್ ತಂಙಳ್, ಅಳಕೆಯ ಮುಸ್ತಾಫ ತಂಙಳ್, ಉಜಿರೆ ಎಸ್. ಎಂ. ತಂಙಳ್, ಕರಾಯದ ಹೈದರ್ ಮದನಿ, ಕಾಜೂರಿನ ಕೆ. ಎಂ. ಉಮರ್ ಸಖಾಫಿ, ನಿವೃತ್ತ ಪೊಲೀಸ್ ಅಧಿಕಾರಿ ಜಿ.ಎ. ಬಾವ, ಜಿಲ್ಲಾ ಪಂಚಾಯತ್ ಸದಸ್ಯ ಸಾಹುಲ್ ಹಮೀದ್, ಸುನ್ನಿ ಸೆಂಟರ್ ಅಧ್ಯಕ್ಷ ಪಿ.ಯು. ಆಲಿಕುಂಞಿ ಸಖಾಫಿ, ಕೃಷ್ಣಾಪುರದ ಮಮ್ತಾಝ್ ಆಲಿ, ತಾಲೂಕು ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಬಿ.ಎ. ನಝೀರ್, ಎಸ್. ಎಂ.ಎ. ಅಧ್ಯಕ್ಷ ಅಬ್ದುಲ್ ಖಾದರ್ ಉಜಿರ್‌ಬೆಟ್ಟು, ಎ. ಅಬ್ದುಲ್ಲ ತುರ್ಕಳಿಕೆ, ಅಬ್ಬೋನು ಬದ್ಯಾರು, ಉಮರ್ ಕುಂಞಿ ಮುಸ್ಲಿಯಾರ್, ಹೈದರ್ ಮಡಂ ತ್ಯಾರು, ಅಬ್ಬಾಸ್ ಬಟ್ಲಡ್ಕ ಮೊದಲಾದವರು ಇದ್ದರು.
ಕಾಜೂರಿನ ಕೆ.ಪಿ.ಎಸ್. ಝೈನುಲ್ ಆಬಿದೀನ್ ಜಮಲುಲ್ಲೈಲಿ ತಂಙಳ್ ಸ್ವಾಗತಿಸಿದರು. ಪತ್ರಕರ್ತ ಅಶ್ರಫ್ ಆಲಿಕುಂಞಿ ನಿರ್ವಹಿಸಿದರು. ಅಬ್ದುರ್ರಹಮಾನ್ ಸಾದಾತ್ ತಂಙಳ್ ಅವರು ವಂದಿಸಿದರು.
ಸೌಜನ್ಯ: ಉದಯವಾಣಿ